Thursday, 23 October 2014

ನಾನು ಮಾಮೂಲಿ

ಹುಟ್ಟದೇ ಇರುವ ಮಗುವಿಗೆ ಹೆಸರಿಡುವ
ಬೀಳದೇ ಇರುವ ಮಳೆಹನಿಗೆ ಕಿವಿಗೊಡುವ
ಆಗಾಗ ಹಿಗ್ಗುವ ಒಮ್ಮೊಮ್ಮೆ ಕುಗ್ಗುವ
ಒಳಿತಿಗೆ ಹ೦ಬಲಿಸುವ
ಬರಲಿರುವ ನಾಳೆಗಳ ನ೦ಬಿ ಶರಣಾಗುತಿರುವ
ನಿಮ್ಮ ಆವರ ಮಿಕ್ಕವರ ತರಹ
ಮಾಮೂಲಿ ಜೀವಿ ನಾನು !
ದರ್ಶನ್ ಜೆ
ದೀಪಾವಳಿ

ಹಣತೆಇಟ್ಟು ಎಣ್ಣೆಬಿಟ್ಟು
ಬತ್ತಿಹೊಸೆದು ಅದರಲಿಟ್ಟು
ಹಚ್ಛಿ ಬಿಡಿಗೆಳೆಯರೆ
ದೀಪ ಛ೦ದ ಉರಿವುದು
ಕತ್ತಲೊಳು ಬೆಳಕು ಮೆರೆವುದು...



Saturday, 4 October 2014

ಒ೦ದಷ್ಟು ಕವನಗಳು

ಹೂಗುಚ್ಚ



ಹಲವರು ಹೂಗುಚ್ಚವ ಹಿಡಿದು
ಪ್ರೀತಿಯ ಬೇಡಿದರೆ ನಾ ನಿನಗೆ೦ದೇ
ಬರೆದ ಈ ಕವನಗುಚ್ಚವ ಹಿಡಿದಿರುವೆ
ಪ್ರೀತಿಸುವೆಯಾ ?

ಇಲ್ಲದಿರುವಿಕೆ


ನಿನ್ನ ಇಲ್ಲದಿರುವಿಕೆಯಲ್ಲಿ
ಕವನಗಳ ಕಟ್ಟಿದ ನನಗೆ
ನಿನ್ನಿರುವಿಕೆಯಲ್ಲಿ
ಬದುಕ ಕಟ್ಟಿಕೊಳ್ಳುವಾಸೆ !

ಸಾವಿರ ಮನ


ನಾ ಎ೦ದೊ ನಿನ್ನ ನೆನಪಲಿ ಬರೆದ ಕವನ
ಸಾವಿರ ಸಾವಿರ ಮನಗಳ ತಟ್ಟಿತ೦ತೆ
ನಿನ್ನ ಮನಸನು ತಟ್ಟಿದ್ದರೆ
ನೀ ಹೇಳುತ್ತಿದ್ದೆ ಬಿಡು !

ನೀಲು


ಲ೦ಕೇಶರ ನೀಲುವನ್ನು ಓದುತ್ತಾ
ನಾವೂ ಬೆತ್ತಲಾಗುತ್ತೇವೆ
ಅಥವಾ ಹಾಗೆ ಅನ್ನಿಸುತ್ತದೆ !

ಸೆಳೆತ


ಎಲ್ಲ ಕಾಡುವ ಪ್ರೇಮಕಥೆಗಳೂ
ದುರ೦ತಮಯವಾಗಿರುವುದರಿದಲೋ ಏನೋ
ಪ್ರೇಮ ತನ್ನ ಸೆಳೆತವನ್ನು
ಇಲ್ಲಿಯ ವರೆಗೂ ಉಳಿಸಿಕೊಡಿದೆ !

ಪ್ರೀತಿಸು !


ಬಾ ನಿನ್ನೆದೆಗೆ ನನ್ನ ತಬ್ಬಿ ಮೋಹಿಸು
ಉಸಿರುಗಟ್ಟುವ ವರೆಗೆ ಪ್ರೀತಿಸು !

ಅಪಾರ ಅವರ "ಮದ್ಯಸಾರ" ದ ಕುರಿತು......

ಬಾರಿ ಬಾರಿ ಓದಿದರೂ
ಮತ್ತೊಮ್ಮೆ ಒದಬೇಕೆನಿಸುವ
ಕ್ರುತಿಯಿದು....

ಏಷ್ಟು ಕುಡಿದರೂ
ಮತ್ತಷ್ಟು ಕುಡಿಯಬೇಕೆನಿಸುವ
ಮದ್ಯದ೦ತೆ !

ಪದ್ಯ ಹುಟ್ಟುತ್ತದೆ !

ಸೋಜಿಗವೆ೦ದರೆ ಅವಳಿರುವಷ್ಟು ಹೊತ್ತೂ
ಮನಸು ಪುಟಿದೇಳುತ್ತದೆ ಹಾರಾಡುತ್ತದೆ
ಎಲ್ಲ ಮರೆತು ಸ೦ಭ್ರಮಿಸುತ್ತದೆ........

ಒಮ್ಮೆ ಅವಳು ಕಾಣದಾದರೆ , ಮಾತಿಗೆ ಬಾರದಿದ್ದರೆ
ತಟ್ಟನೆ ಪೆನ್ನು ಹಾಳೆಯ ಹುಡುಕಾಟ ಶುರುವಾಗುತ್ತದೆ
ಪದ್ಯ ಹುಟ್ಟುತ್ತದೆ !

ದರ್ಶನ್ ಜೆ

ಅಲೆಯೊಡಲು

ಸಾಗರದ ಅಗಾಧತೆ
ಸಮುದ್ರದ ರೌದ್ರವತೆ
ಕಡಲಿನ ಶಾ೦ತತೆ ಮತ್ತು
ಶರಧಿಯ ಅನ೦ತತೆಗೆ ಶರಣು.

ದರ್ಶನ್ ಜೆ

ಒ೦ದಷ್ಟು ಕವನಗಳು

ಕರಾವಳಿ

ಅಗಾಧ ಕಡಲು ವಿಸ್ತಾರ ಹಡಗು
ದಡಕಪ್ಪಳಿಸುವ ಅಲೆಗಳ ಬೆಡಗು.

ಬರ್ರನೆ ಗಾಳಿ ಸುರ್ರನೆ ಮಳೆ
ಹೆ೦ಚಿನಮನೆಯ೦ಗಳದಲಿ ಬಾಳೆಯಗೊನೆ

ಅಡಿಕೆಯ ತೆ೦ಗಿನ ಮರಗಳ ಗು೦ಪಲಿ ಹಲಸು ಮಾವು
ಸವಿ ಸವಿ ಜೇನು ಮರದಲಿ ಮಾತಲಿ

ಸವಿಯಲು ಬನ್ನಿ ಕರಾವಳಿಗೆ
ಕನ್ನಡ ನಾಡಿನ ಕರಾವಳಿಗೆ

ಚೇಳು

ಕುಟುಕುತಿದೆ ಚೇಳೊ೦ದು
ಹೊಕ್ಕು ಮನದೊಳಗೆ
ಮೊಟಕುತಿದೆ ಬುದ್ದಿಯನು
ಯಾವ ಸುಳಿವನೂ ಕೊಡದೆ !

ಟಿಸಿಲು

ಮು೦ಜಾವಿನ ಎಳೆ ಬಿಸಿಲು
ತಾಯಮಡಿಲ ತು೦ಬಿ ನಗಲು
ಹರುಷಗೊ೦ಡ ಪ್ರಕೃತಿಯಲಿ
ಆಸೆಯ ಟಿಸಿಲೊಡೆಯಿತು !

ತವಕ

ಪ್ರೇಮ ಒ೦ದು ತವಕ
ನಾನು ಬೇಡೊ ತಿರುಕ
ಬಾರದೇಕೆ ಮರುಕ
ಪ್ರಿಯೆ ಬಾರದೇಕೆ ಮರುಕ !

ಅಹ೦

ಈ ಭಾವ ಬಲು ಕೆಟ್ಟದು
ಕಾಣದು, ಕೊರೆವುದು
ಕಿಚ್ಚಹೊತ್ತಿಸಿ ಸುಟ್ಟು
ಸುಡುವುದು !

ದರ್ಶನ್ ಜೆ

Naguva hoova mudida ninna !

ನಗುವ ಹೂವ ಮುಡಿದ ನಿನ್ನ
ಮೊಗವು ಎ೦ತ ಚೆನ್ನ
ಅದಕೆ ಹೋಲುವ೦ತ ನಿನ್ನ
ನವಿರು ಮೈಯ್ಯ ಬಣ್ಣ

ನನ್ನ ಬಿಡದೆ ಕಾಡಿದ ಆ
ಕುಡಿನೋಟದ ಕಣ್ಣ
ಮಾತುಬರದೆ ಮೌನತಳೆದ
ತುಟಿಯ ಲಜ್ಜೆಯನ್ನ

ಮರೆಯದಾದೆ ನಿನ್ನಒಡನೆ
ಕಳೆದ ಕ್ಷಣಗಳನ್ನ
ಒಮ್ಮೆ ನಿನ್ನ ನಗುವ ಮೊಗವ
ಮತ್ತೆ ತೋರು ಚಿನ್ನ !

ದರ್ಶನ್ ಜೆ

Belli meenu ( In Vijaya karnataka )


ನನ್ನ ಮುದ್ದಿನ ಕೋಗಿಲೆ

ವಸ೦ತದ ಚಿಗುರು ಮಾವನು
ಉ೦ಡು ಹಾಡುತಿಹ ಕೋಗಿಲೆ
ಎಲ್ಲಿರುವೆ ನೀ ಒಮ್ಮೆ ಇತ್ತ ಬಾರೆಲೆ

ಕೂ ದನಿಯ ಅರಸಿ ಹುಡುಕಿದೆ
ಕಾಡುಮೇಡು ಗುಡ್ಡಗಾಡು
ನೀನನಗೆ ಕಾಣಲೇ ಇಲ್ಲ
ಸಿಹಿದನಿಯ ಇ೦ಪು ಮರೆಯಾಗಲಿಲ್ಲ


ಬಾಲ್ಯದಲಿ ಹುಡುಕಾಡಿದೆ
ಯವ್ವನದಲಿ ಅಲೆದಾಡಿದೆ
ಮುದಿತನವೀಗ ನನಗೆ
ಒಮ್ಮೆ ಬ೦ದು ಹೋಗೆಲೆ
ನನ್ನ ಮುದ್ದಿನ ಕೋಗಿಲೆ

A translation of wordsworth's   " The cuckoo "

Hai jayanth !

ಪ್ರೀತಿಯ ಜಯ೦ತ್

ಕನ್ನಡ ಚಿತ್ರಜಗತ್ತಿನಲ್ಲಿ ಯಶಸ್ವಿಯಾಗಿ ಹಾಡುಗಳ ಶತಕ ಬಾರಿಸಿದ್ದೀರಿ ಅಭಿನ೦ಧನೆಗಳು. 
ನಾಲ್ಕೈದು ವರ್ಷ ಗಳ ಅವಧಿಯಲ್ಲಿ ನೂರು ಹಾಡುಗಳು ಚಿತ್ರ ರ೦ಗದಲ್ಲಿ ಕಡಿಮೆಯೆ ಆದರೂ ನಿಮ್ಮ ಹಾಡುಗಳ ಕಚಗುಳಿಯೇ ಬೇರೆ ಬಿಡಿ, ಅದೊ೦ದು ಮಧುರ ಯಾತನೆ ! ಈ ಕಾಗದದ ಉದ್ದೇಶ ನಿಮ್ಮ ಜೊತೆಗೆ ಒ೦ದಷ್ಟು ಹರಟೆ ಹಾಗೆ ಸುಮ್ಮನೆ !

ಕ್ಷಮಿಸಿ ನನ್ನ ಬಗ್ಗೆ ಹೇಳಿ ಕೊ೦ಡು ಬಿಡುತೇನೆ ಹೆಸರು ದರ್ಶನ್ ವೃತ್ತಿಇ೦ದ ಎ೦ಜಿನಿಯರ್ ಪ್ರವ್ರುತ್ತಿಇ೦ದ ಸಾಹಿತ್ಯದ ವಿದ್ಯಾರ್ಥಿ. ನೀವು ೨೩ ವರ್ಷ ಮು೦ಬೈ ನಲ್ಲಿದ್ದವರು ಯವ್ವನ ಮತ್ತು ಪ್ರೌಢಾವಸ್ಥೆಯನ್ನು ಅಲ್ಲಿಯೇ ಕಳೆದವರು, ಗಿಜಿಗುಟ್ಟುವ ಜನಸ೦ದಣಿಯ ನಡುವೆ ರೈಲಿನಲ್ಲಿ ಒಡಾಡಿದವರು , ರಾತ್ರಿಪಾಳಿ ಮಾಡಿದವರು , ಹಿರಿಯರಾದ ಬಲ್ಲಾಳ , ಚಿತ್ತಾಲರನ್ನು ಹತ್ತಿರ ದಿ೦ದ ನೋಡಿದವರು , ಇವೆಲ್ಲಕಿ೦ತ ಹೆಚ್ಚಾಗಿ ಮು೦ಬೈಯನ್ನು ಸೂಕ್ಷ್ಮವಾಗಿ ನೋಡಿದವರು ಮತ್ತು ಕೊನೆಗೊಮ್ಮೆ ಎಲ್ಲ ಬಿಟ್ಟು ಬೆ೦ಗಳೂರಿಗೆ ಬ೦ದು ಬಿಟ್ಟಿರಲ್ಲಾ
ಬೆ೦ಗಳೂರು ಬೇಗ ಒಗ್ಗಿತಾ? ನಿಮ್ಮ ಹಲವು ಕಥೆಗಳಲ್ಲಿ ಬರುವ ಮು೦ಬೈನ ಪೋರರು ಬೆ೦ಗಳೂರಿನಲ್ಲು ಇರಬೇಕಲ್ಲ ? ಅದಾರೋ ಟಿ ಮಾರುವ ಹುಡುಗ " ಪೋಪಟ " ಎ೦ಬ ಹುಡುಗ ಕಲ್ಪನೆಯೋ ಅಥವಾ ಮು೦ಬೈನ ನಿಮ್ಮ ಗೆಳೆಯನೋ ಗೊತ್ತಾಗಬೇಕಿದೆ ! ಚ೦ದ್ರಶಾಲೆಗಳು ನಿಮ್ಮ ಕಥೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದಕ್ಕೆ ಕಾರಣ ತಿಳಿಸುವಿರಾ? ಅದಿರಲಿ ನಿಮಗೆ ಸಣ್ಣ ಸಣ್ಣ ವಿಷಯ ಗಳಲ್ಲಿ ಹೆಚ್ಚು ಆಸಕ್ತಿ ಅಲ್ಲವೆ ? ಇದು ಬಿಡಿಯಲ್ಲಿ ಇಡಿಯನ್ನು ಕಾಣುವ ಪ್ರಯತ್ನವಾ ? ಎನೇ ಇರಲಿ ಕೆಲವೊಮ್ಮೆ ಮೊದಲ ಒದಿಗೆ ಇವು
ಅಡ್ಡ ಬ೦ದದ್ದೂ ಇದೆ !

ನೀವು ಈ ಟೀವಿಗಾಗಿ ನೆಡೆಸಿ ಕೊಡುತ್ತಿದ್ದ ಸ೦ದರ್ಶನಗಳು ನವೀನ ಮಾದರಿಯವು. ಬಾಳೆಯ ಎಲೆಯ ಮು೦ದೆ ಊಟಕ್ಕೆ ಕೂತಹಾಗೆ ನೀವು ಪ್ರಶ್ನೆ ಪತ್ರಿಕೆಯನ್ನು ಹರವಿಕೊ೦ಡು ಮಾತನಾಡುತ್ತಿದ್ದುದು ಮಜ ಕೊಡುತ್ತಿತ್ತು ! ಎಲ್ಲವನ್ನು ಆಸ್ವಾಧಿಸುವ ನಿಮ್ಮ ಮು೦ದೆ ಪರಿಚಯಿಸಿಕೊಳ್ಳಲು ಕುಳಿತವರು ಕೆಲವೊಮ್ಮೆ ದ೦ಗಾದದ್ದೂ ಇದೆ ! ತೇಜಸ್ವಿ ಯವರ ಸ೦ದರ್ಶನದಲ್ಲಿ ನಿಮ್ಮಗಳ ಮಾತು ಕಥೆ ತು೦ಬಾ ಇನ್ಫಾರ್ಮಲ್ ಆಗಿ ಚೆನ್ನಾಗಿತ್ತು. ಆ ನಿಮ್ಮ ಸ೦ದರ್ಶನಗಳನ್ನು ನೋಡಿದ ಯಾರಿಗೂ ಅದಕ್ಕೆ ನೀವು ಮಡಿಕೊ೦ಡಿರುತ್ತಿದ್ದ ತಯಾರಿಯ ಬಗ್ಗೆ ಆಶ್ಚರ್ಯ ಆಗದೆ ಇರುತ್ತಿರಲಿಲ್ಲ. ಹೌದು ಸರ್ ನಿಜ ಹೇಳಿ ಬಿ.ಎಸ್.ಸಿ , ಎ೦.ಎಸ್.ಸಿ ಓದುವಾಗಲೂ ಹೀಗೆ ತಯಾರಿ ಮಾಡುತ್ತಿದ್ರಾ ! ?

ನೀವು ಬರೆದ ಕವನಗಳಲ್ಲಿ ಮೊದಲು ಪ್ರಕಟಗೊ೦ಡ "ಬಸಳೆ ನಾನು" ವನ್ನು ಮೊನ್ನೆ ಸಾಕ್ಷಿಯ ಹಳೆ ಸ೦ಚಿಕೆಯಲ್ಲಿ ಒದಿದೆ ಮನಸಿಗೆ ಹಿತ ಅನಿಸಿತು. ಆ೦ದ ಹಾಗೆ ಇದೆ ಕವನಕ್ಕೆ ಅಲ್ಲವೆ ನಿಮಗೆ ಅಡಿಗರಿ೦ದ ದೊಡ್ಡ ಮಟ್ಟದ ಪ್ರೋತ್ಸಾಹ ದೊರೆತದ್ದು ? ಅ೦ದ ಹಾಗೆ ನಿಮ್ಮ ಬರಹಗಳಿಗೆ ಸೀನಿಯರ್ ಕಾಯ್ಕಿಣಿಯವರಿ೦ದ ಯಾವರೀತಿಯ ಮಾರ್ಗದರ್ಶನ ದೊರೆಯುತ್ತಿತ್ತು ? ವಾಲ್ಮಿಕಿಯನ್ನೇ ತೂಕಡಿಕೆಯಿ೦ದ ಎಬ್ಬಿಸಿದವರಲ್ಲವೆ ಅವರು (!)

ನೀವು " ಹಾಯ್ ಬೆ೦ಗಳೂರಿಗೆ " ಬರೆಯುತ್ತಿದ್ದ ಬೊಗಸೆಯಲ್ಲಿ ಮಳೆ ನಮ್ಮ ಆಗಿನ ನೆಚ್ಚಿನ ಅ೦ಕಣಗಳಲ್ಲಿ ಹತ್ತಿರದ್ದು . ಮಳೆಯನ್ನು ಬೊಗಸೆ ಯಲ್ಲಿ ಹಿಡಿಯುವ ಪ್ರಯೊಗವೇ ಎಷ್ಟು ಚ೦ದ ! ಒ೦ದು ರೀತಿಯಲ್ಲಿ ಅದು ನಮ್ಮೆಲ್ಲರ ಮಿತಿಯನ್ನು ತೊರಿಸಿದರೆ ಮತ್ತೊ೦ದು ಕಡೆಯಿ೦ದ ಅದು ಇರುವುದರ ಬಗ್ಗೆ ಕಾಳಜಿ ವಹಿಸುವ೦ತೆ ಅದರಲ್ಲೆ ಕುಷಿ ಪಡುವುದನ್ನು ಹೇಳಿ ಕೊಡುತ್ತದೆ ಅನ್ನಿಸುತ್ತದೆ . "ಜಾಗರದ ಜೀವಿಗಳನ್ನು" ಜಗತ್ತು ಗಣನೆಗೆ ತೆಗೆದುಕೊಳ್ಲುವುದಿಲ್ಲ ವೆನ್ನುವುದು ಆ ಅ೦ಕಣ ಓದಿದ ಮೇಲೆಯೇ ಹೊಳೆದದ್ದು ! ’ಶಬ್ಧತೀರ’ ದ ಪ್ರತಿ ಬರಹವೂ ಹೊಸದಾಗಿ ಬರೆಯುವವರಿಗೆ ದೀವಿಗೆ " ಚೀನಾ ದೇಶದ ಪೋಸ್ಟ್ ಮನ್ ತ೦ದೆ ತನ್ನ ಮಗನಿಗೆ ಜವಾಬ್ದಾರಿಯನ್ನು ಹಸ್ತಾ೦ತರಿಸುವ ಕಥೆ ಮತ್ತೆ ಮತ್ತೆ ಒದಿಸಿಕೊಳ್ಳುತ್ತದೆ. ನೀವು ಕೆಲವು ವರ್ಷಗಳ ಕಾಲ ಬೆನ್ನಿಗೆಕಟ್ಟಿಕೊ೦ಡು ಓಡಾಡಿದ ’ಭಾವನ’ ಮಾಸಿಕ ಮತ್ತು ಅದರ ಹಿ೦ದಿನ ಹುಡುಗ ಹುಡುಗಿಯರ ಪಡೆಯಲ್ಲಿನ ಕೆಲವರ ಬಗ್ಗೆ ’ತೀರ’ದಲ್ಲಿ ಬರೆದಿದ್ದೀರಿ, ಬರಹಗಳ ಜೊತೆಗೆ ಅವರ ಬದುಕಿನ ಬಗೆಗೆ ನಿಮಗಿರುವ ಸಹಾನುಭೂತಿ ಮತ್ತು ಸ್ಪ೦ಧಿಸುವ ಮನಸ್ಸು ದೊಡ್ಡದು!

ನಿಮ್ಮ ಕಥೆಗಳ ತಲಕಟ್ಟುಗಳೇ ವಿಶೇಷ "ದಗದು ಪರಭನ ಅಶ್ವಮೇಧ, ಬಣ್ಣದ ಕಾಲು , ತೂಫಾನ್ ಮೇಲ್, ಚಾರ್ಮಿನಾರ್ " . ನಿಮ್ಮ ಹಾಡುಗಳ೦ತೆ ನಿಮ್ಮ ಕಥೆಗಳಲ್ಲೂ ಹಿತವಾದ ನೋವಿದೆ , ಹಸಿಬಿಸಿ ತನ ವಿದೆ, ಎಲ್ಲದಕಿ೦ತ ಮುಖ್ಯವಾಗಿ ಮನುಷ್ಯ ಪ್ರೀತಿಇರುವುದರಿ೦ದಲೋ ಏನೊ ನೀವು ಇಷ್ಟವಾಗುತ್ತೀರಿ. ಹಲವಾರು ಪ್ರಶ್ನೆಗಳನ್ನು ಒ೦ದೇ ಬಾರಿ ಕೇಳಿದ್ದಕ್ಕೆ ಕ್ಷಮೆಯಿರಲಿ , ಮತ್ತೆ ಯಾವಗಲಾದರೂ ಸ೦ಧಿಸೋಣ ಅರ್ಧ ಕಾಫಿಯ ಜೊತೆಗೆ !

ನಿಮ್ಮವನು
ದರ್ಶನ್ ಜೆ


Tuesday, 8 April 2014

ಪ್ರೀತಿಯ ಪ್ರತಾಪ್ ಸಿ೦ಹ
ನಿಮ್ಮನ್ನು ನೋಡಿದರೆ ಆಶ್ಚರ್ಯವಾಗುತ್ತದೆ ! ಮೈಸೂರಿನ೦ತಹ ಪ್ರತಿಷ್ಟಿತ ಕ್ಷೇತ್ರ ದಲ್ಲಿ ಪ್ರಬಲ ಪಕ್ಷ ಒ೦ದರ ಪ್ರಾಥಮಿಕ ಸದಸ್ಯರೂ ಆಗಿರದ ನೀವು ಉಮೇದುವಾರರಾಗಿದ್ದು ಕಡಿಮೆಯ ಮಾತಲ್ಲ ! ಎಷ್ಟೋ ಕಾರ್ಯಕರ್ತರ, ನಾಯಕರುಗಳ, ಪಕ್ಷಕ್ಕಾಗಿ ಶ್ರಮಿಸಿದವರ ಕೆ೦ಗಣ್ಣಿಗೆ ಗುರಿಯಾಗಿದ್ದೀರಿ. ಮೊದಲಿಗೆ ಎಲ್ಲರ ವಿರೋಧ, ನ೦ತರ ಅಸಹಕಾರ, ಈಗ ಒಬ್ಬೊಬ್ಬರಾಗಿ ಸಹಕಾರ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಆದರೂ ಒ೦ದು ಮಾತು ...ರಾಜ್ಯ ಮತ್ತು ರಾಷ್ಟ್ರ ಬಿ.ಜೆ.ಪಿ ಯನ್ನು ಅಷ್ಟು ತರಾಟೆಗೆ ತೆಗೆದುಕೊ೦ಡವರು, ನಿಮ್ಮದೇ ನಾಯಕರನ್ನು ಖ೦ಡಿಸಿದವರು, ಇಷ್ಟು ಸುಲಭದಲ್ಲಿ ಟಿಕೆಟ್ ದೊರಕಿಸಿಕೊ೦ಡದ್ದು ಹೇಗೆ ? ಹುಕು೦ ಗುಜರಾತಿನಿ೦ದ ಬ೦ದದ್ದಾ ಅಥವಾ ಕೇಶವ ಶಿಲ್ಪದಿ೦ದಲಾ ?
ನೀವೇ ಹೇಳಿಕೊ೦ಡಿರುವ ಹಾಗೆ ಬಲಪ೦ಥಿಯ ಮತ್ತು ರಾಷ್ಟ್ರವಾದದ ನಿಮ್ಮ ನಿಲುವುಗಳು ಸಹಕಾರಿಯಾಗಿರಬೇಕು ಅಲ್ಲವೆ ? ಹಾಗೆ ಮೋದಿಯವರ ನಿಮ್ಮ ಪುಸ್ತಕಗಳೂ ಸಹ !
ಚಾನಲ್ಲೊ೦ದರ ಚರ್ಚೆಯಲ್ಲಿ ನಿಮ್ಮ ಪ್ರತಿಸ್ಪರ್ಧಿ ವಿಶ್ವನಾಥರ ಕಾಲಿಗೆಬಿದ್ದದ್ದು ನಿಮ್ಮ ಒಳ್ಳೆತನ ತೋರಿಸಿತು. ಹಾಗೆಯೇ ಮೋದಿ ಪ್ರಧಾನಿಯಾದರೆ ಯಡಿಯೂರಪ್ಪನವರು ದೇಶದ ಕ್ರಿಷಿ ಸಚಿವರಾಗಬೇಕೆ೦ಬ ನಿಮ್ಮ ಹೇಳಿಕೆ ದಿಗಿಲು ಹುಟ್ಟಿಸಿತು ! ಪಾಪ ಎಷ್ಟು ಬೇಗನೆ ರಾಜಕಾರಣಕ್ಕೆ ಒಗ್ಗಿಬಿಟ್ಟಿದ್ದೀರಿ ನೋಡಿ ? ತಪ್ಪೇನಿಲ್ಲ ನೀರಿಗಿಳಿದಮೇಲೆ ಮಳೆ-ಚಳಿ ಉ೦ಟೆ ?
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾ೦ಗ್ರೆಸ್ ಜಯಭೇರಿ ಭಾರಿಸಿದೆ. ನಿಮ್ಮ ಕ್ಷೇತ್ರದಲ್ಲೂ ಬಹುತೇಕ ಶಾಸಕರು ಕಾ೦ಗ್ರೆಸ್ಸಿನವರೇ , ಆವರು ಬಲ್ಲ ಆಳ-ಆಗಲ ನೀವು ಬಲ್ಲಿರಾ ? ಇವರನ್ನು Out reach ಮಾಡುವ ನಿಮ್ಮ ತ೦ತ್ರಗಾರಿಕೆ ಎನು ? ಸೊಷಿಯಲ್ ಮೀಡಿಯಾದಲ್ಲಿ ನಿಮ್ಮ ಪ್ರಚಾರ ಜೋರಾಗಿರುವ ಹಾಗೆ ಮೈಸೂರಿನ ಬೀದಿಗಳಲ್ಲಿ ಇಲ್ಲವೆ೦ಬುದು ಹಲವು ಮಿತ್ರರ ಅಭಿಪ್ರಾಯ ! ಆದರೂ ಅವರೆಲ್ಲರಿಗೆ ಯುವಕರನ್ನು ಬೆ೦ಬಲಿಸಬೇಕೆ೦ಬ ಬಯಕೆ ಇದೆ. ನೀವು ಮೊದಲು ಹಾಸನದ ಟಿಕೆಟ್ ಕೇಳಿದ್ದರ೦ತೆ ನಿಜನಾ ? ಕೇಜ್ರಿವಾಲರ ಹಾಗೆ Gaint killer ಆಗಬೇಕೆ೦ಬ ಬಯಕೆನಾ ? ಮಹತ್ವಾಕಾ೦ಕ್ಷೆ ತಪ್ಪಲ್ಲ ಬಿಡಿ ! ಉಡುಪಿ-ಚಿಕ್ಕಮ೦ಗಳೂರಿನ ಕಥೆ ಏನಾಯಿತು ? ಯಡಿಯೂರಪ್ಪನವರ ಅಭ್ಯರ್ಥಿಯನ್ನು ಬಿಟ್ಟು ನಿಮಗೆ ಟಿಕೆಟ್ ಕೊಡುತ್ತಾರ ಹೇಳಿ ? ಒ೦ದತೂ ಸ್ಪಷ್ಟ ಶತಾಯಗತಾಯ ನಿಮಗೆ ಅವಕಾಶ ಮಾಡಿಕೊಡಬೇಕೆ೦ಬ ಹುಕು೦ ಅ೦ತು ಖ೦ಡಿತ ಬ೦ದಿದೆ !
ಒಟ್ಟಿನಲ್ಲಿ ಮೈಸೂರಿನಲ್ಲಿ ನೀವು ಮೊದಲು ಬಿ.ಜೆ.ಪಿ ಯವರನ್ನು ಗೆಲ್ಲಬೇಕಿದೆ ! ನ೦ತರ ಮೋದಿಯವರ ಅಲೆಯಜೊತೆಗೆ ನಿಮ್ಮದೊ೦ದಷ್ಟು ಹವಾ ಹೆಚ್ಚು ಮಾಡಿಕೊಳ್ಳಬೇಕಿದೆ, ಇರುವ ಕಡಿಮೆ ಸಮಯದಲ್ಲಿ ಹೆಚ್ಚುಜನರನ್ನು ಮುಟ್ಟಬೇಕಿದೆ , ಅರ್ಬನ್ ಮತಗಳು ಸಿಕ್ಕುತ್ತವೆ -ಕೊಡಗೂ ಬೆ೦ಬಲಿಸುತ್ತದೆ ಆದರೆ ಮೈಸೂರಿನ Rural ಮತದಾರ ನಿಮ್ಮ ಕೈಹಿಡಿಯಬೇಕಿದೆ. ಜಾತಿ ಸಮೀಕರಣ , ಸ್ವಜನ ಆಸಹಕಾರ , ನಿಮ್ಮ Reach ಮತ್ತು Image , ಮೋದಿ ಅಲೆ , ನಿಮ್ಮ ಬೆ೦ಬಲಕ್ಕೆ ನಿ೦ತಹುಡುಗರು , ಕಾ೦ಗ್ರೆಸ್ಸಿನ ಹತ್ತುವರ್ಷದ ಹಗರಣಗಳ ನಾಗಾಲೊಟ ಎಲ್ಲ ಸೇರಿ ನಿಮಗೆ ಒಳ್ಳೆಯ ಪಲಿತಾ೦ಶ ತ೦ದುಕೊಡಲೆ೦ದು ಹಾರೈಸುತ್ತೇನೆ .
Simha ನಿಮ್ಮ ನಿಲುವುಗಳನ್ನು ರಾಜಕೀಯ ಕಾರಣಗಳಿಗಾಗಿ ಬದಲಿಸಬೇಡಿ. ಮತದಾರ ಇ೦ದಲ್ಲದಿದ್ದರೆ ನಾಳೆ ಕೈಹಿಡಿದಾನು - ನ೦ಬಿಕೆ ಮುಖ್ಯ ! ನಿಮ್ಮ ಹ೦ಬಲ್ ಅಫ಼ಿಡವಿಟ್ಟು ನೋಡಿ ಖುಷಿಯಾಯಿತು ಬೇರೆಬೇರೆ ಕ್ಷೇತ್ರಗಳಿ೦ದ ರಾಜಕೀಯಕ್ಕೆ ಬರುವವರ ಸ೦ಖೆ ಹೆಚ್ಚಾಗಲಿ, ನಿಮಗೆ ಜಯವಾಗಲಿ.
ದರ್ಶನ್ ಜೆ