Thursday, 1 March 2018

ಹಸಿದವನ ಕೊಲೆ

ಹಸಿವೆಯನ್ನು ಕೊಲ್ಲಲಾಗದ ಸಮಾಜ
ಹಸಿದವನನ್ನು ಕೊಲ್ಲುತ್ತದೆ ! 
ಸತ್ತವನನ್ನು ದೇವರು ಮಾಡಿ 
ಬದುಕಿದವನು ಕೇವಲನಾಗುತ್ತಾನೆ !

ಕೂಪಮಂಡೂಕ

ಕಾರವಾರದ ಕೂಪಮಂಡೂಕನಿಗೆ 
ಭಾರತದ ಇತಿಹಾಸವೆಲ್ಲಾ ಕರತಲಾಮಲಕ 
ಅವನ ಯೋಗ್ಯತೆಗೆ ನಾಡಿನ ಭಾಷೆಯ
ಬೇರು ಮತ್ತು ಎಳೆಗಳು ಮಾತ್ರ ನಿಲುಕವು !

Anathkumar Hedge # 

ಋಣ

ಸಾಲ ಮಾಡಿದವರು
ಓಡಿ ಹೋಗುತ್ತಾರೆ ....
ತಪ್ಪು ಮಾಡಿದವರು
ಖುಲಾಸೆಯಾಗುತ್ತಾರೆ ....
ಅಡ್ಡಿಯಿಲ್ಲ
ಆದರೆ
ನಮ್ಮ ಮಧ್ಯೆ ಇದ್ದುಕೊಂಡು
ನಮಗಾಗಿ ಹೋರಾಡಿದ
ಕೆ ಸ್ ಪುಟ್ಟಣಯ್ಯ ನಂತವರು
ಇಷ್ಟು ಬೇಗ ಋಣ ಹೊರಿಸಿ
ಹೊರಟು ಬಿಡುವುದು
ಏಕೆ ???
# RIP ...K S Puttanaiah #

ಧರ್ಮ ದರ್ಶನ

ಎಲ್ಲರೂ ಕಾಸು ಕೊಟ್ಟು
ಹೋದರು ವಿಶೇಷ ದರ್ಶನಕ್ಕೆ
ನಾನೂ ಅವರ ಹಿಂಬಾಲಿಸಿದೆ ...
ಜನ ಮರುಳೋ 
ಜಾತ್ರೆ ಮರುಳೋ
ಗೊತ್ತಿಲ್ಲ !
ಧರ್ಮ ದರ್ಶನದ ಹಾದಿ ಸುಗಮವಾಗಿತ್ತು
ಕಾಸು ಕೊಟ್ಟವರ ಪಾಡು ನೋಡಬೇಕಿತ್ತು
ನಾನು ಕೊಟ್ಟ ದುಡ್ಡಿಗೆ ಅಷ್ಟು ರಂಜನೆ ಸಾಕಾಯ್ತು !

ಯಾರು ಹೆಚ್ಚು ?

ಯಾರು ಹೆಚ್ಚು ? ಯಾರು ಕಡಿಮೆ ? 
ಕಡೆಗೆ ಉಳಿವುದೊಂದೆ - ಒಲುಮೆ 
ಕೊಟ್ಟು ಕೊಟ್ಟು ಹಗುರವಾಗು 
ಪಡೆದು ಪಡೆದು ಧನ್ಯನಾಗು !

ಉರಿವ ಧರೆ

ನೀರ ಎರಚಿ
ಉರಿವ ಧರೆಯ ತಣಿಸಬಹುದೇ ?
ಮಣ್ಣ ತೂರಿ
ಜಗದ ಕಣ್ಣ ಮುಚ್ಚಬಹುದೇ ?
ನೆತ್ತರಲಿ ಬರೆದ ಪದ್ಯ
ಹಾಡಾಗಬಹುದೇ ?
ಓರೆ ಕೋರೆಗಳಿಗೆ ನಕ್ಕಿದ್ದು
ಮಂದಹಾಸವಾಗುವುದೇ  ?
ತನ್ನ ತಾನರಿದುಕೊಂಡು
ಹಗುರವಾಗಬಹುದೇ ?