ಮಹತ್ವಾಕಾಂಕ್ಷಿ
ನರಚರ್ಮಗಳನೆಳೆದು ನಗುವುದು
ಸುಮ್ಮನೆ ಬೊಗಳೆಹೊಡೆವುದು
ಶಿವಪೂಜೆಗೆ ಕರಡಿಯಂತೆರಗುವುದು
ತಲೆಖಾಲಿ ಇದ್ದಾಗಲೆಲ್ಲ ನಾಲಗೆಗೆ
ಕೆಲಸಕೊಡುವುದು , ಕಂಡದ್ದಕ್ಕೂ
ಕಾಣದ್ದಕ್ಕೂ ಮರುಗುವುದು
ಅಲ್ಲೊಂದ್ ಇಲ್ಲೊಂದನಾಡುವುದು
ಬೆಟ್ಟಹತ್ತಲಾಗದೆ ಅಟ್ಟಕ್ಕೆ ಹಗ್ಗಹೊಸೆವುದು
ಮಹತ್ವಾಕಾಂಕ್ಷಿಯ ಜರಿವುದು !
ನರಚರ್ಮಗಳನೆಳೆದು ನಗುವುದು
ಸುಮ್ಮನೆ ಬೊಗಳೆಹೊಡೆವುದು
ಶಿವಪೂಜೆಗೆ ಕರಡಿಯಂತೆರಗುವುದು
ತಲೆಖಾಲಿ ಇದ್ದಾಗಲೆಲ್ಲ ನಾಲಗೆಗೆ
ಕೆಲಸಕೊಡುವುದು , ಕಂಡದ್ದಕ್ಕೂ
ಕಾಣದ್ದಕ್ಕೂ ಮರುಗುವುದು
ಅಲ್ಲೊಂದ್ ಇಲ್ಲೊಂದನಾಡುವುದು
ಬೆಟ್ಟಹತ್ತಲಾಗದೆ ಅಟ್ಟಕ್ಕೆ ಹಗ್ಗಹೊಸೆವುದು
ಮಹತ್ವಾಕಾಂಕ್ಷಿಯ ಜರಿವುದು !