Wednesday, 28 December 2016

ಆದರೆ………

ಚಿಟ್ಟೆ ಹಿಡಿದೆ
ಬಣ್ಣ ಮೆತ್ತಿಕೊ೦ಡಿತು
ಹೂವ ಕಿತ್ತೆ
ಗ೦ಧ ಮುಟ್ಟಿಕೊ೦ಡಿತು

ಆದರೆ………

ನಲುಗಿದ ಚಿಟ್ಟೆ ಸತ್ತಿತು
ಕೊಯ್ದ ಹೂವು ಬಾಡಿತ್ತು
ನನಗೇನೋ ಮೆಟ್ಟಿಕೊ೦ಡಿತ್ತು !

Saturday, 26 November 2016


ಮಣ್ಣಿಗಾದರು ಇಡಲಿ
ಬೆಂಕಿಗಾದರು ಕೊಡಲಿ
ಬಿಟ್ಟು ಬಿಡಿ
ಅವರ ಪಾಡಿಗವರನು !

ಮಣ್ಣ ಕೆದುಕದಿರಿ
ಬೂದಿ ಎರಚದಿರಿ
ಬದುಕಲು ಬಿಡಿ
ಸತ್ತವನನು !

Thursday, 24 November 2016

ಸಾಕು 

ಕವಿತೆ ಬಾಳಲು ಹತ್ತಾರು
 ಸಹೃದಯಿಗಳು ಬೇಕು !
ಕವಿ ಬದುಕಲು ಒಂದಿಬ್ಬರು 
ಹುಂಬ ಗೆಳೆಯರು ಸಾಕು !



ಇನ್ನೊಂದು ಪೆಗ್ಗು 

ಹಾರಾಡದೆ ಚೀರಾಡದೆ
ನಿಧಾನವಾಗಿ ಎಲ್ಲದಕ್ಕೂ
ಒಗ್ಗು
ತಡಿ ಬೆರೆಸುವೆ
ಇನ್ನೊಂದು
ಪೆಗ್ಗು !

Tuesday, 15 November 2016

ಹುಡುಕಾಟದ ಹುಡುಗಿ 

ಕವಿತೆಯ ಬರೆದೆ ಗೆಳತಿ
ನನ್ನಂತರಾಳದ ಒಡತಿ 
ಬರೆಯಲು ನಿಲುಕದ 
ಆ ಭಾವನೆಗಳ 
ಬಗೆದು ಬಸಿಯುವ 
ದುಸ್ಸಾಹಸದಲಿ 
ಆ ನಗುವನು ಹೋಲಿಸೆ 
ಹುಡುಕಾಡಿದ ಉಪಮೆಗಳಲಿ 
ನೀ  ಸಿಕ್ಕೋ ಇಲ್ಲೋ ?
ಸಿಕ್ಕಾಗ ನಿಂತು 
ಮತ್ತೋಡಿದೆಲ್ಲೋ ?
ಮತ್ಸಿಗುವುದೆಲ್ಲೋ ಗೆಳತಿ 
ನನ್ನೀ ಹುಡುಕಾಟದ 
ಒಡತಿ !!!
ನೆನಪಿನಂಗಳ 

ನೆನಪಿನಾ ಅಂಗಳದಿ
ನಿಂತೆ ನಾ ಒಂದುದಿನ
ಎಷ್ಟು ಚಂದವಿತ್ತು
ಆ ನೋಟ !

ಚೀರಾಡಿ ಹಾರಾಡಿ
ಬಿದ್ದು ಎಳೆದಾಡಿ
ಆಡಿದ್ದ ಕಬಡ್ಡಿಯಾಟ !

ಆತುರದಿ ಮರವೇರಿ
ಬಿದ್ದು ಕೈ ಮುರಿದರೂ
ಮತ್ತೆಯಾಡುತ್ತಿದ್ದ
ಮರಕೋತಿಯಾಟ !

ಚಾಟಿಯೊಳು ಸುತ್ತಿ
ಕೈಮೇಲಕೆತ್ತಿ
 ರಪ್ಪನೆ ಒಗೆದಾಡಿಸುತ್ತಿದ್ದ
ರಂಗಿನಾ ಬುಗರಿಯಾಟ !

ಬೀದಿಬೀದಿಯೊಳು
ಬಾಲೆಯರು ಆಡುತ್ತಿದ್ದ
ಕುಂಟೆ ಬಿಲ್ಲೆಯಾಟ !

ನಾಮೇಲು ತಾಮೇಲು
ಎನ್ನುವಂತೆ ಹಾರಿಸಿ
ಗೋತಹೊಡೆಯಲು
ಒಳಗೇ ಅತ್ತ
ಗಾಳಿಪಟದಾಟ !

ಗಲ್ಲಿ ಗಲ್ಲಿಗಳಲ್ಲಿ
ಕಾಣಸಿಕ್ಕುತ್ತಿದ್ದ
ಗೋಲಿ ಕ್ರಿಕೆಟ್ಟು
ಕಣ್ಣಾಮುಚ್ಚಾಲೆ ಯಾಟ !

ಎಲ್ಲವೂ ಬಂದಿತ್ತು
ಅಂಗಳಕೆ ಅಂದು !
ಹುಡುಕಿದರೂ ಕಾಣದು
ಆ ನೋಟ ಇಂದು !!!















ರೈತ  ಮತ್ತು  ಕುಣಿಕೆ !

ಒಂದು ಹದ ಮಳೆ ಹೊಯ್ದ ಬೆನ್ನಲೇ
ಹೂಡುವನು ರೈತ ನೇಗಿಲನು
ಗೇಯುವೆನು ನೆಲವ ತದೇಕಚಿತ್ತದಲಿ
ಮುಂದೊಂದು ದಿನದ ಹಸಿರು
ಸುಳಿದಾಡಲು ಕಣ್ಮನಗಳಲಿ !

ಮಳೆಬಾರದಿದ್ದರೆ ? ನೆಲಅರಳದಿದ್ದರೆ ?
ಆದರೆ ಹೋದರೆಂದು ಚಿಂತಿಸದೆ
ಹೂಡುವನು ನೇಗಿಲನು
ಬೆವರ  ಹರಿಸಿ.

ಕಂಗೊಳಿಸೆ ಹಸಿರು
ತೆನೆತೂಗಿಯಾಡಲು
ನಮಿಸುವನು ಜೀವಜಾತೆಗೆ
ಉಣಿಸುವನು ಕುಲ ಕೋಟಿಗೆ !

ಯಾರಮುನಿಸಿಗೋ
ಒಂದೊಮ್ಮೆ  ಅರಳದಿದ್ದರೆ ಹಸಿರು
ಖಾಯುವನು ತಾ ತನ್ನೊಳಗೆ !

ಎಷ್ಟು ಮಳೆಹೊಯ್ದರೂ
ತಣ್ಣಗಾಗದ " ಖಾವು "
ಸುಡುವುದು ಸುತ್ತಲಿನವರನೂ !

ಮಳೆಬಾರದಿದ್ದರೇನಂತೆ
ಅಡಗಲಾರದೆ  ನೋವು ?
ಮರುಗುತಲಿ ಹುಡುಕುವನು
ಕುಣಿಕೆಯನು !




ಒಲುಮೆ 

ಆರದಿರಲಿ ಬಾಳಿನೊಲುಮೆ
ಸ್ವಚ್ಛಂದದ ಚೈತನ್ಯ ಚಿಲುಮೆ
ನುಗ್ಗುತಿರಲಿ ಹೊಸತು ಭಾವ
ಮರೆಸೆ ಜೀವದೆಲ್ಲ ನೋವ !
ಜೇನ ಹೀರುವಾ !

ಬಾ ಬಾರೆ ಮುದ್ದು ಗಿಳಿಯೆ
ಕೂಡಿ ಕುಣಿಯುವ
ಹಾಡಿನಲಿದು ಜೇನ ಮೊಗೆದು
ಬಾನ ಸೇರುವ !

ನಮ್ಮ ನೋಡೆ ನಾಚಿಕೆಯಲಿ
ಚಂದ್ರ ನುಲಿವನು
ದೂರದಿಂದೆ ತಾರೆಗಳವು
ಕಣ್ಣ ಹೊಡೆವುವು !

ಚೆಲ್ವೆ ನೀನು ಚೆಲ್ವ ನಾನು
ಒಲವ ಬಿಟ್ಟು ಭಾಗ್ಯವೇನು ?

ರೆಕ್ಕೆ ಬಡಿದು " ಕಾಲ " ತೊರೆದು
ಮೇಲೆ ಏರುವ
ದೂರ ದೂರ ತೇಲೆ
ಪ್ರೇಮದೂರ ಸೇರುವ !

ತಳಮಳ 


ಏನೋ ತಳಮಳ ಮನದೊಳಗೆ
ಅರ್ಥವಾಗದ ಒಗಟಾಗಿದೆ 
ಇದು ನನಗೆ !
ಎಲ್ಲೋ ಏನೋ ಉದುಗಿದೆ ಆಳದಲಿ 
ಅರಿಯದೆ ಪರಿತಪಿಸುತಿರುವೆ 
ನೋವಿನಲಿ !
ಮರೀಚಿಕೆ 

ಕಾಣದಾನು ಅರಸಿ
ಓಡಿಓಡಿ ಮುಂದಕೆ
ಸವೆದಿವೆ ಪಾದಗಳು
ಬತ್ತಿದೆ ಗಂಟಲು !

ಹೆಜ್ಜೆ ಗುರುತುಗಳು
ಮೂಡುತ್ತಲೇ ಇವೆ
ಕಾದ ಮರಳಿನಲ್ಲಿ
ದಿಕ್ಕೆಟ್ಟಂತೆ !

ಉರಿವ ಬಿಸಿಲಿಗೆ
ಏಲ್ಲವೂ ಕರಗುತಿದೆ
ಸ್ಪಷ್ಟವಾಗುತ್ತಿದೆ
ಬಿಸಿಲುಗುದುರೆ !

ಕಾಣದಿದ್ದರೂ ಸರಿಯೇ
ಅರಸಿ ಹೊರಟದ್ದು
ಸಿಗಲಿ ಸಾಕು
ಮರೀಚಿಕೆ !

Tuesday, 18 October 2016

ನಾ ಬರೆವುದು
ನೀ ಮುದಗೊಳ್ಳಲಿಕ್ಕಲ್ಲ
ನಾ ಹದಗೊಳ್ಳಲಿಕ್ಕೆ !

ನಾ ಬರೆವುದು
ನಿನ್ನ ಬದಲಾವಣೆಗಲ್ಲ
ನನ್ನ ಬೆಳವಣಿಗೆಗೆ !

ನಾ ಬರೆವುದು
ನಿನ್ನ ಬಿಡುವಿನ ಹವ್ಯಾಸಕ್ಕಲ್ಲ
ನನ್ನ ಬಿಡುಗಡೆಯ ' ನ್ಯಾ ಸಕ್ಕೆ ' !!!

Thursday, 25 August 2016

ಮಿನುಗು ಮಿನುಗು ನಕ್ಶತ್ರ
ಹೇಗೆ ಬರಲಿ ನಿನ್ನತ್ರ ?
ಮೇಲೆ ಇರುವೆ ಅಷ್ಟೆತ್ರ
ಹೊಳೆಯುವ ಬಾನಿನ ಭೂಚಕ್ರ !

Twinke twinkle little star's distorted version ;)

Wednesday, 17 August 2016

Tobacco ಮತ್ತು Tabloid 

Tobacco ಗೂ Tabloid ಗೂ
ಎ೦ತ ವ್ಯತ್ಸಾಸನೂ ಇಲ್ಲ !

ಒ೦ದು ದೇಹವನ್ನು ಗುಡಿಸಿದರೆ
ಇನ್ನೊ೦ದು ಮನಸನ್ನು ಕೆಡೆಸುತ್ತದೆ !

ಒ೦ದರಿ೦ದ ನೋವು ಉಚಿತ
ಇನ್ನೊ೦ದರಿ೦ದ ಸಾವು ಖಚಿತ !

Sunday, 7 August 2016

ಎಲ್ಲಿದೆ ಘನತೆ ?

ಹಿರಿಯ ಜೀವಗಳ
ತುಮುಲಗಳನರಿಯದ
ಯುವಕರಿಗೆಲ್ಲಿದೆ
ಘನತೆ ?

ಕಿರಿಯರಿಗೆ
ದಾರಿಮಾಡಿಕೊಡದೆ
ಭರ್ತಿ ಕು೦ತ
ಹಿರಿಯರಿಗಿಲ್ಲ
ಕೊರತೆ !



ಹುಸಿ ಸ್ವಾತಂತ್ರ !

ಬೆಳಕಿರದ ಲಾಟೀನು
ಹಕ್ಕಿಯಿರದ ಪ೦ಜರ
ಯಾವ ಹೋಲಿಕೆ ?
ಒ೦ದರಲ್ಲಿ ಬೆಳಕು
ನ೦ದಿಹೋಗಿ
ಭಯ ಮಡುಗಟ್ಟಿದೆ !
ಇನ್ನೊ೦ದರಲ್ಲಿ ಹಕ್ಕಿ
ಹಾರಿಹೋಗಿ
ಸ್ವಾತಂತ್ರದ ಬಯಕೆ
ಹುಟ್ಟಿದೆ!

Sunday, 31 July 2016

ಮ೦ಕು ತಮ್ಮ೦ದಿರಾ !

ಜಾಗ ಇಲ್ಲ ಅ೦ತ ಕೆರೆಗಳ ಸಾರಿಸಿ
ಕಚ್ಚುವುದೆ೦ದು ನಾಯಿಗಳ ಓಡಿಸಿ
ಗೆಬರುವುದೆ೦ದು ಕೋತಿಗಳ ಹಿಡಿಸಿ 
ಡಬ್ಬಲ್ ರೋಡುಗಳಿಗಾಗಿ ಮರಗಳ ಬೀಳಿಸಿ
ಕಡೆಗೆ ಸಿಲ್ಕ್ ಬೋರ್ಡ್ ಸಿಗ್ನಲ್ ನಲ್ಲಿ
ಕೊಚ್ಚೆಯ ಹಾರಿಸಿ !

Sunday, 24 July 2016

ಗೆಳೆಯ 


ಬದುಕೆ೦ಬ ವಿಶಾಲ ಕಡಲಿನಲಿ
ಗೆಳೆತನವೆ೦ಬ ವಿಸ್ತಾರ ಹಡಗಿನಲಿ
ಸಾಗೋಣ ದೂರ ದೂರ
ಬಾರಾ  ಗೆಳೆಯಾ ಬಾರ !

ಅವಳು 

ಇರುಳಿಡೀ ಮಳೆ ಸುರಿದ 
ಮುಂಜಾವು ಮುದ್ದೆ !
ಯಾಕೋ ಅವಳ ನೆನಪಾಗಿ 
ಮನಸೆಲ್ಲ ವದ್ದೆ !

Sunday, 10 July 2016

ಓ ನನ್ನ ಚೇತನ

ವಿಕಲಾ೦ಗ
ಅ೦ಗ ವಿಕಲ
ವಿಕಲ ಚೇತನ 
ವಿಶೇಷ ಚೇತನ
ಓ ನನ್ನ ಚೇತನ 
ಆಗುತಿರುವೆ ನೂತನ !
ಹೇ ಬ೦ಧು

ಹೇ ಬ೦ಧು ಎಕೆ ಹೀಗೆ
ನಿನದೇ ಜನರ ಕೊಲ್ಲುತಿರುವೆ ?
ನಿನದೇ "ಮಜಬನು" ಮುರಿಯುತಿರುವೆ ?
ಸರಿತಪ್ಪು ಒರೆಕೋರೆಗಳ ಒಗಟ
ಆದಾವ ಗ್ರ೦ಥದಿ ಹುಡುಕುತಿರುವೆ ?

Sunday, 19 June 2016


Oh I see !


ಮರಳುಗಾಡಿನಲ್ಲಿ ಅಲ್ಲಲ್ಲಿ
ನೀರಿರುವ ಹೊ೦ಡಗಳನ್ನು
ಒಯಸಿಸ್ ಎನ್ನುತ್ತಾರೆ !
ಹೈದರಾಬಾದಿನಲ್ಲಿಯೇ
ಅಬ್ಬರಿಸಿ ಬೊಬ್ಬಿರಿಯುವ
ಮೆದುಳಿಲ್ಲದ ಮ೦ಡೆಗೆ
ಒವೈಸಿ ಎನ್ನುತ್ತಾರೆ !


Wrote on july 4th 2015

ರವಿ ಮುಳುಗಿದ ನಿಜ, ಎ೦ದಿನ೦ತಲ್ಲ ಇದು ಸಾಭಾವಿಕ !
ನ೦ಬಿಕೆ ಇರಲೇಬೇಕು ನಾಳೆಯಲ್ಲಿ ಮತ್ತೆ ರವಿ 
ಬರುವನೊ೦ದು ಇನ್ನಷ್ಟು ಪ್ರಜ್ವಲಿಸಿ ಪ್ರಕಾಶಿಸುತ್ತ !
ಅಲ್ಲಿಯವರೆವಿಗೂ ಉರಿಯಲಿ ಪುಟ್ಟ ಹಣತೆಗಳು
ಹೊರಡಲಿ ಪ೦ಜಿನ ಮೆರವಣಿಗೆ.
ರವಿ ಸತ್ತನೆ೦ಬುವವರಿಗಿದೆ ಬೆ೦ಕಿಯ ರುಚಿ
ಮೂಡಿದ ಮರುಗಳಿಗೆ !

Monday, 13 June 2016

ಸೊಕ್ಕು  !


ನನಗೊ೦ದಿಷ್ಟು ಸೊಕ್ಕು
ಬ೦ದಿದೆ ಇತ್ತೀಚೆಗೆ !
ರೂಢಿಸಿಕೊ೦ಡದ್ದೊ
ಅದಾಗೆ ಬ೦ದದ್ದೊ ಅರಿಯೆ
ಒಟ್ಟಿನಲ್ಲಿ ಬ೦ದಿದೆ !

ಸೊಕ್ಕು ಸಾತ್ವಿಕವಾದರೆ
ಒಳ್ಳೆಯದ೦ತೆ
ಹಾಗೆ೦ದರೆ ಏನು ?

ಹೇಳಿ ದಯವಿಟ್ಟು
ಸೊಕ್ಕು ಮಾಡದೆ ನೀವು
ಅದನೂ ರೂಡಿಸಿಕೊಳ್ಳುತ್ತೇನೆ
ಇರುವುದರ ಜೊತೆಗೆ !
ಬ೦ದಷ್ಟು ಬರಲಿ
ಇದ್ದದ್ದೂ ಇರಲಿ !




Tuesday, 7 June 2016


ಅಸಡ್ಡೆ ಮತ್ತು ಭಯ

ಎಲ್ಲಿಯವರೆಗೂ
ಪ್ರಕ್ರುತಿ
ತಾಯಿಯ೦ತೆ 
ಪೊರೆವುದೋ
ಅಲ್ಲಿಯವರೆಗೆ
ಮನುಷ್ಯ
ಎದೆ ಸಟೆದು
ಬೀಗುತ್ತಾನೆ !
ಅವಳೆ೦ದರೆ
ಅಸಡ್ಡೆಯಾ ?
ಯಾವಾಗ
ಹೆ೦ಡತಿಯ೦ತೆ
ತಿವಿದು
ಮೊಟಕುವುಡದೋ
ಆಗ ಬಹುಶಹ
ಬಾಗುತ್ತಾನೆ !
ಇವಳೆ೦ದರೆ
ಭಯ !
ದರ್ಶನ್ ಜೆ
ಮನುಷ್ಯ 


ಹೆಬ್ಬ೦ಡೆಗಳ ಸ೦ದುಗೊ೦ದಿನಲ್ಲಿ
ಬೇರುಬಿಟ್ಟು ಮರಬೆಳೆಯಬಹುದಾದರೆ
ಮರಳುಗಾಡಿನ ಬ೦ಜರಿನಲ್ಲಿ
ಜೀವ ಮೊಳೆಯಬಹುದಾದರೆ
ಮನುಷ್ಯ ಕೂಡ ಬದಲಾಗಬಹುದೇನೋ  ?
ಅದರೇನು ಮಾಡುವುದು ಪ್ರಕ್ರುತಿ
ಅವನಿಗೆ ಅವಕಾಶವನ್ನೇ
ಮಾಡಿಕೊಡುತ್ತಿಲ್ಲ ವಲ್ಲ !

Saturday, 23 April 2016

ಹೆಗಲು 

ನೊಗ ಹೊತ್ತವನ ಹೆಗಲು 
ತಾಯ ಮಡಿಲಿಗೂ ಮಿಗಿಲು !
ಒಂದು ಲಾಲಿತ್ಯ ಮತ್ತೊಂದು ಕರ್ತವ್ಯ 
ಒಂದು ಸ್ವಾರ್ಥ ಮತ್ತೊಂದು ನಿಸ್ವಾರ್ಥ !


Thursday, 7 April 2016

ಯುಗಾದಿ ಶುಭಾಶಯ  

ಯುಗದ ಆದಿಗೆ
ಆಶಾ ದೀವಿಗೆ
ಬೇವು ಬೆಲ್ಲ ಬೆರೆಸಿ
ಅಕ್ಕರೆಯನು ಉಣಿಸಿ

ಚಂದದ್ದು ಇರಲಿ
ಭಾಗ್ಯಾದಿ ಬರಲಿ
ನಮ್ಮ ನಡುವಣ
ಪ್ರೀತಿ ಹಾಗೆಯೇ
ಇರಲಿ !

Monday, 4 April 2016

ಜೋ ಜೋ ಲಾಲಿ 


ಜೋ ಜೋ ಲಾಲಿ ಜೋ ಜೋ
ಜೋ ಜೋ  ಕಂದ ಜೋ ಜೋ

ಮಲಗೂ ನಿನ್ನ ಪಾಡಿಗೆ
ಮಲಗೂ ನನ್ನ ಹಾಡಿಗೆ
ಚಂದಿರ ಬರುವನು ಕನಸಲಿ
ತೂಗುವನು ಬೆಳದಿಂಗಳ ಜೋಕಾಲಿ !

ಜೋ ಜೋ ಲಾಲಿ ಜೋ ಜೋ
ಜೋ ಜೋ ಮುದ್ದು ಜೋ ಜೋ

ತಂಗಾಳಿ ತಂಪನೆರೆಯಲಿ
ಅಲೆಗಳ ಮೊರೆತದಿ ಮನ ತೇಲಲಿ
ಕಾನನದಾ ಮೌನ ತಬ್ಬಲಿ
ಮುಂಜಾವಿನ ಹಕ್ಕಿಯ
ಚಿಲಿಪಿಲಿಯಷ್ಟೆ ಕೇಳಲಿ !

ಜೋ ಜೋ ಲಾಲಿ ಜೋ ಜೋ
ಜೋ ಜೋ ಚಿನ್ನ ಜೋ ಜೋ
ಜೋ ಜೋ ಲಾಲಿ ಜೋ ಜೋ
ಜೋ ಜೋ ಲಾಲಿ ಜೋ



Tuesday, 22 March 2016

ಖಾಲಿಯಾದೆ

ಆವಳು ನಕ್ಕಾಗ ಹಿಗ್ಗಿದೆ
ಅತ್ತಾಗ ಕುಗ್ಗಿದೆ
ಸಿಟ್ಟಾದಾಗ ನಕ್ಕೆ
ಸುಮ್ಮನಿದ್ದಾಗ
ಕಳವಳಗೊ೦ಡೆ
ಮಾತುಬಿಟ್ಟಾಗ
ಮ್ಲಾನನಾದೆ
ಈಗೋ ಅವಳ
ಸುಳಿವಿಲ್ಲ ?
ನಾ ಖಾಲಿಯಾದೆ!


Monday, 14 March 2016

ತುಂಬೆ ಗಿಡಗಳ ಊರು


ನಮ್ಮೂರೆ೦ದರೆ
ಕಲ್ಪತರುಗಳ ಊರು
ಸಿದ್ದಗಂಗೆಯ ತೇರು
ಕಲಾವಿದರ ತವರು !

ನಮ್ಮೂರೆ೦ದರೆ
ತ್ರಿವಿದ ದಾಸೋಹಿ
ಮಹಾಭಿಕ್ಷು
ದೊದ್ದಬುದ್ದೇರು.

ನಮ್ಮೂರೆ೦ದರೆ
ಕಾಡು ಕುರುಚಲು
ಬಯಲು ಸೀಮೆಗೆ 
ಹೆಬ್ಬಾಗಿಲು !

ನಮ್ಮೂರೆ೦ದರೆ
ಕಲ್ಲು ಬಂಡೆಗಳಿಗೆ
ಜೀವ ಕೊಟ್ಟ
ಡ೦ಕಣ ಚಕಣರು !

ನಮ್ಮೂರೆ೦ದರೆ
ಅಣುವಿನಲ್ಲಿ ಪ್ರಖಾಂಡ
ಶಕ್ತಿಯನು  ಕಂಡ
ರಾಜಾ ರಾಮಣ್ಣರು !

ನಮ್ಮೂರೆ೦ದರೆ
ಆನೆ ಕುದುರೆಯ
ರಂಗಕ್ಕೆ ಪರಿಚಯಿಸಿದ
ಗುಬ್ಬಿ ವೀರಣ್ಣೊರು !

ಅಷ್ಟೇ ಅಲ್ಲ ಇರಿ
ನಮ್ಮೂರೆ೦ದರೆ
ಹೊಗೆಯಾಡುವ ತಟ್ಟೆ ಇಡ್ಲಿ
ತುಪ್ಪದ ರಾಗಿ ಬಿಸ್ಕೇಟು
ಅಕ್ಕಿ ರೊಟ್ಟಿ ಅವರೇಕಾಯಿ ಉಸ್ಲಿ !

ನಮ್ಮೂರೆ೦ದರೆ
ಕಲ್ಪತರುಗಳ ಊರು
ಸಿದ್ದಗಂಗೆಯ ತೇರು
ಕಲಾವಿದರ ತವರು !














Saturday, 5 March 2016


ಮಂಕುತಿಮ್ಮನ ಮಾಡಿದರು !

ಹೌದುರಿ 
ಇವರು ಲೀಡರು 
ರೈತಚಳುವಳಿಯಿಂದ  
ಬಂದವರು 
ಉಳುಮೆ ಬಿಟ್ಟವರು
ಚಳುವಳಿಗೆ ಕೈ ಕೊಟ್ಟರು  !

ಮತ್ತಿವರು  
ಲೋಹಿಯಾರ 
ಹೆಸರೇಳಿ 
ಬಂದರು ದುಂದು 
ವೆಚ್ಚ ಮಾಡಿದರು
ಸಬೂಬು ಕೊಟ್ಟರು  !

ಇನ್ನಿವರು 
ಜಮೀನುಧಾರರ 
ವಿರೋಧಿಸಿದವರು 
ತಾವೇ ಆಯಕಟ್ಟಿನಲ್ಲಿ 
ಜಮೀನು ಮಾಡಿ 
ಮಾರಿದರು !

ಮತ್ತವರು 
ಧಾರ್ಮಿಕರು 
ಗುಡಿಯ ಕೆಡವಿದರು 
ಮಸೀದಿಯ ಒಡೆದರು 
ಇಗರ್ಜಿಗೆ ಕಲ್ಲು ಎಸೆದರು !

ಇನ್ನು "ಈಗಿನವರು" 
ಮೆಲಿನವರನೆಲ್ಲ 
ತೆಗಳಿ ನಮ್ಮನ್ನು 
ಮಂಕುತಿಮ್ಮರನ್ನಾಗಿ 
ಮಾಡುವವರು ! 


 


Monday, 22 February 2016

ಮಗು 

ಮನದ ಖಾವ ಆರಿಸಿ
ಮೊಗದಿ ನಗುವ ಅರಳಿಸಿ
ಜೀವಸೆಲೆಯ ಮರಳಿಸೋ
ಮಗುವೆ ನಿನಗೆ ವಂದನೆ !

Friday, 19 February 2016


ವಿಮರ್ಶಕ

ರವಿ ಕವಿ ಕುಡುಕ
ಕಾಣದನ್ನು ಕಂಡು
ಹಿಡಿಯುವನನ್ನು
ವಿಮರ್ಶಕ ಎನ್ನುತಾರೆ !
ವೆಂಕಟ in ಸಂಕಟ 

ಸಂಕಟ ಬಂದಾಗ
ವೆಂಕಟರಮಣ
ಚುನಾವಣೆ ಬಂದಾಗ
ಧರಿದ್ರ ನಾರಾಯಣ !
ಅವನು ಇವನು 

ಅವನು ಬರೆವುದನ್ನು ಆಸೆಯಿಂದ
ಓದುವ ಇವನು ಅವನನ್ನು
ಕವಿಯಾಗಿಸುತ್ತಾನೆ !

ಅವನಿಗಾಗೇ  ಬರೆದುಕೊಳ್ಳುತ್ತಿದ್ದ
ಇವನು ಅ೦ದಿನಿಂದ ಇವನಿಗಾಗಿ
ಬರೆಯಲಾರಂಭಿಸುತ್ತಾನೆ !

ಅವನಿವನ ಮಧ್ಯೆ
ಪ್ರೇಮಾ೦ಕುರವಾಗಿ
ಪದ್ಯ ಹುಟ್ಟುತ್ತದೆ !

Wednesday, 10 February 2016

ಬೆಳಕೆಂಬ ಬ್ರಮೆ 

ಕತ್ತಲಲಿ ಗುಮ್ಮ ಬರುವನು
ಎನ್ನುತಿದ್ದಳು ಅಮ್ಮ !
ನನಗೆ ಅದಕೆ ಏನೋ
ಕತ್ತಲೆಂದರೆ ಇಂದಿಗೂ ಭಯ !
ಬೆಳಕು ಕತ್ತಲನೋಡಿಸುವುದು
ಎಂಬುದು ಬರೀ ಸುಳ್ಳು !
ಎಷ್ಟೋ ಬಾರಿ ಕತ್ತಲೇ ಬೆಳಕನ್ನು
ಓಡಿಸಿದ್ಡೂ  ಉಂಟು !
ಕತ್ತಲೇ ಶಾಶ್ವತ
ಅದೂ ಸಾವಿನಂತೆ ನಿಶ್ಚಿತ !
ನಮ್ಮ ತೊಳಲಾಟ ಹುಡುಕಾಟಗಳೆಲ್ಲವೂ
 ಕತ್ತಲನು ಕೊಂಚ ದೂರವಿಡುವುದರಲ್ಲೇ
ಕಳೆಯುತ್ತಿದೆ ನಮಗೂ
ವಯಸ್ಸಾಗುತ್ತಿದೆ  !
ಕಂಡದ್ದು ಬೆಳಕು ಕಾಣದ್ದು ಕತ್ತಲೆ
ಮಧ್ಯೆ ಸಿಲುಕಿದೆ  ಬದುಕು !
ಒಂದು ದಾರಿ 

ಕವಿತೆ ಬರೆದೆನೆ೦ದ ಮಾತ್ರಕ್ಕೆ
ನಾ ಕವಿಯಲ್ಲ ಕವಿಯಾಗ
ಬಯಸುವುದೂ ಇಲ್ಲ !
ನನ್ನೆದೆಯ ಮಿಡಿತ ಮತ್ತು
ತಲೆಯ ಕೊರೆತಗಳ ಸ೦ಬಾಳಿಸಲಿಕ್ಕೆ
ನನಗಿರುವ ಒ೦ದು ದಾರಿ

ಇದು !

Saturday, 6 February 2016

ಬುದ್ಧಿವಂತರು

ಬುದ್ದಿವಂತರು ಮನೆ ಮಟ
ಮಾಡಿಕೊಳ್ಳುತ್ತಾರೆ
ದಡ್ಡರು ಕವಿತೆ ಕವನಗಳ
ಕಟ್ತುತಾರೆ !
ಹಸ್ತಾಂತರ 

ಎದೆಯ ಭಗೆದರೂ ಹಸಿರ
ಚಿಮ್ಮುವ ಭೂಮಿ
ತನ್ನ ಮಕ್ಕಳಿಗೂ ಅದೇ
ಗುಣವನ್ನು ಹಸ್ತಾಂತರಿಸಿದೆ  !



Friday, 15 January 2016


ಹೆದ್ದಾರಿಯವರು 
ಹೆದ್ದಾರಿಗಳನೇ ಹಾಯ್ದು
ಊರವರ್ಣಿಸುತ್ತಿದ್ದ ಗೆಳೆಯರೇ
ಈ ನಡುವೆ ಹೆದ್ದಾರಿಗಳು
ಊರ ಹೊಕ್ಕುತ್ತಲಿಲ್ಲ !
ಬಹುಶಹ ಇನ್ನು ನಿಮ್ಮ
ಬೇಳೆ ಬೇಯೋದಿಲ್ಲ !

ರಾಮನಾಥ
ಅನ್ನುವರು ಆಡುವರು
ಏನೇನೋ ಮಾಡುವರು
ಮಂಕುಬೂದಿ ಎರಚುವರು
ಒಂದಷ್ಟು ಗೀಚಿ !
ಭಾಷಣವ ಬಿಗಿಯುವರು
ಒತಪ್ರೋಥ
ಗಿಡವನೊಂದನು ಮಾತ್ರ
ನೆಡರು ರಾಮನಾಥ !