ಕಿರಿಯರಿಗೆ
ದಾರಿಮಾಡಿಕೊಡದೆ
ಭರ್ತಿ ಕು೦ತ
ಹಿರಿಯರಿಗಿಲ್ಲ
ಕೊರತೆ !
ಹುಸಿ ಸ್ವಾತಂತ್ರ !
ಬೆಳಕಿರದ ಲಾಟೀನು
ಹಕ್ಕಿಯಿರದ ಪ೦ಜರ
ಯಾವ ಹೋಲಿಕೆ ?
ಒ೦ದರಲ್ಲಿ ಬೆಳಕು
ನ೦ದಿಹೋಗಿ
ಭಯ ಮಡುಗಟ್ಟಿದೆ !
ಇನ್ನೊ೦ದರಲ್ಲಿ ಹಕ್ಕಿ
ಹಾರಿಹೋಗಿ
ಸ್ವಾತಂತ್ರದ ಬಯಕೆ
ಹುಟ್ಟಿದೆ!
Sunday, 31 July 2016
ಮ೦ಕು ತಮ್ಮ೦ದಿರಾ !
ಜಾಗ ಇಲ್ಲ ಅ೦ತ ಕೆರೆಗಳ ಸಾರಿಸಿ
ಕಚ್ಚುವುದೆ೦ದು ನಾಯಿಗಳ ಓಡಿಸಿ
ಗೆಬರುವುದೆ೦ದು ಕೋತಿಗಳ ಹಿಡಿಸಿ ಡಬ್ಬಲ್ ರೋಡುಗಳಿಗಾಗಿ ಮರಗಳ ಬೀಳಿಸಿ ಕಡೆಗೆ ಸಿಲ್ಕ್ ಬೋರ್ಡ್ ಸಿಗ್ನಲ್ ನಲ್ಲಿ ಕೊಚ್ಚೆಯ ಹಾರಿಸಿ !
Sunday, 24 July 2016
ಗೆಳೆಯ
ಬದುಕೆ೦ಬ ವಿಶಾಲ ಕಡಲಿನಲಿ
ಗೆಳೆತನವೆ೦ಬ ವಿಸ್ತಾರ ಹಡಗಿನಲಿ
ಸಾಗೋಣ ದೂರ ದೂರ
ಬಾರಾ ಗೆಳೆಯಾ ಬಾರ !
ಅವಳು ಇರುಳಿಡೀ ಮಳೆ ಸುರಿದ ಮುಂಜಾವು ಮುದ್ದೆ ! ಯಾಕೋ ಅವಳ ನೆನಪಾಗಿ ಮನಸೆಲ್ಲ ವದ್ದೆ !
:(ಇರುಳ
Sunday, 10 July 2016
ಓ ನನ್ನ ಚೇತನ ವಿಕಲಾ೦ಗ ಅ೦ಗ ವಿಕಲ ವಿಕಲ ಚೇತನ ವಿಶೇಷ ಚೇತನ ಓ ನನ್ನ ಚೇತನ ಆಗುತಿರುವೆ ನೂತನ !
ಹೇ ಬ೦ಧು
ಹೇ ಬ೦ಧು ಎಕೆ ಹೀಗೆ ನಿನದೇ ಜನರ ಕೊಲ್ಲುತಿರುವೆ ? ನಿನದೇ "ಮಜಬನು" ಮುರಿಯುತಿರುವೆ ? ಸರಿತಪ್ಪು ಒರೆಕೋರೆಗಳ ಒಗಟ ಆದಾವ ಗ್ರ೦ಥದಿ ಹುಡುಕುತಿರುವೆ ?