ಪ್ರಶ್ನೆಗಳಿರುವುದು ನನಗೆ
ಕೊಲ್ಲುವವನ ಬಂಧಿಸಿ
ಜೈಲಿಗೋ ಕೋರ್ಟಿಗೋ ಅಟ್ಟಿಬಿಡಬಹುದು
ಆ ಮನಸ್ಥಿತಿಯ ಹೇಗೆ ಕೊಲ್ಲುವುದು ?
ತರ್ಕ ಬಲ್ಲವನೊಡನೆ
ಸೋಲೋ ಗೆಲುವೋ ಏನೋ ಒಂದು
ಕುತರ್ಕಿಗಳೊಡನೆ ಹೇಗೆ ಏಗುವುದು ?
ಕಣ್ಣುಕಾಣದವಗೆ ಆಸರೆಯಾಗಬಹುದು
ಕಂಡರೂ ಕಾಣದಂತೆ ನಟಿಸುವವಗೆ
ಯಾವ ಬಿರುದ ಕೊಡುವುದು ?
ಗಾಡಿಯ ಎತ್ತೊಂಡೆದಕ್ಕೆ
ಮತ್ತೊಂದ್ ಬಲಕ್ಕೆ ಎಳೆದಾಡಿದರೆ
ದೂರದಾರಿಯ ಹೇಗೆ ಸಾಗುವುದು !
ಪೇಟೆಯ ಹೇಗೆ ಮುಟ್ಟುವುದು ?
No comments:
Post a Comment