Thursday, 27 August 2015

ತಿಳಿಯಿತು 

ಅಚಾನಕ್ಕಾಗಿ ಏನೋ ಹೊಳೆದಂತಾಗಿ
ಥಟ್ಟನೆ ಬರೆಯಲು ಕುಳಿತೆ
ಸಾಧಾರಣ ಅನಿಸಿತು !
ನನ್ನ ಶಬ್ಧಸಂಪತ್ತನೆಲ್ಲ
ಉಪಯೋಗಿಸಬೇಕೆನಿಸಿತು.
ಹಾಗೆಯೇಮಾಡಿದೆ !
ಬರೆದದ್ದನ್ನು ಒಮ್ಮೆ ಓದಿ
ನನಗೆನಾನೆ ಭೇಷ್ ಎಂದುಕೊಂಡೆ !
ಮತ್ತೊಮ್ಮೆ ಮಗದೊಮ್ಮೆ ಓದಿದೆ
ಯಾಕೋ ಶಬ್ಧಗಳ ಭಾರಕ್ಕೆ
ವಾಕ್ಯಮುರಿದುಬಿತ್ತು !


ದರ್ಶನ್ ಜೆ

No comments:

Post a Comment