Thursday, 27 August 2015

ಮಹತ್ವಾಕಾಂಕ್ಷಿ 

ನರಚರ್ಮಗಳನೆಳೆದು  ನಗುವುದು
ಸುಮ್ಮನೆ ಬೊಗಳೆಹೊಡೆವುದು
ಶಿವಪೂಜೆಗೆ  ಕರಡಿಯಂತೆರಗುವುದು
ತಲೆಖಾಲಿ ಇದ್ದಾಗಲೆಲ್ಲ ನಾಲಗೆಗೆ
ಕೆಲಸಕೊಡುವುದು , ಕಂಡದ್ದಕ್ಕೂ
ಕಾಣದ್ದಕ್ಕೂ ಮರುಗುವುದು
ಅಲ್ಲೊಂದ್ ಇಲ್ಲೊಂದನಾಡುವುದು
ಬೆಟ್ಟಹತ್ತಲಾಗದೆ ಅಟ್ಟಕ್ಕೆ ಹಗ್ಗಹೊಸೆವುದು
ಮಹತ್ವಾಕಾಂಕ್ಷಿಯ ಜರಿವುದು  !

No comments:

Post a Comment