ನಿನ್ನ ನಗು
ಓಹ್...... ಎಂಥಾ ಸೊಬಗು !
ಉಂಟೇ ಅದಕೆ
ಅಳೆವ ಮೊಬಲಗು ?
ಚಿನ್ನ ಬೆಳ್ಳಿ
ಕೇಳಲಿಲ್ಲ ನೀ
ಅದಕಿಂತ ಮಿಗಿಲು
ನಿನ್ನೀ ನಗುವೆಂದು
ಹೇಗೆ ಹೇಳಲಿ ನಾನು ?
ನಾಚಿಕೆ ...ಜುಗ್ಗನೆಂದು
ಕರೆದರೆ ನೀನು !
ಒಂದು ನೂರು ರೂಪಾಯಿಗೆ
ಅವೆಷ್ಟು ಖುಷಿ !
ತಿಂದ ಹುರಿದ ಜೋಳ
ಊದಿದ ನೀರು ಗುಳ್ಳೆ
ಕೆಂದ ಎಳನೀರು
ಅಂಚಿಕಡ್ಡಿಯ
ಮುರಿದು ಕೊಟ್ಟರೂ
ಅದರಲ್ಲೇ ಖುಷಿ ಪಡುವ
ನಗುವ ಧರಿಸಿರುವವಳೇ
ನನಗೆ ನೀನೇ ಮಗು !
ಓಹ್...... ಎಂಥಾ ಸೊಬಗು !
ಉಂಟೇ ಅದಕೆ
ಅಳೆವ ಮೊಬಲಗು ?
ಚಿನ್ನ ಬೆಳ್ಳಿ
ಕೇಳಲಿಲ್ಲ ನೀ
ಅದಕಿಂತ ಮಿಗಿಲು
ನಿನ್ನೀ ನಗುವೆಂದು
ಹೇಗೆ ಹೇಳಲಿ ನಾನು ?
ನಾಚಿಕೆ ...ಜುಗ್ಗನೆಂದು
ಕರೆದರೆ ನೀನು !
ಒಂದು ನೂರು ರೂಪಾಯಿಗೆ
ಅವೆಷ್ಟು ಖುಷಿ !
ತಿಂದ ಹುರಿದ ಜೋಳ
ಊದಿದ ನೀರು ಗುಳ್ಳೆ
ಕೆಂದ ಎಳನೀರು
ಅಂಚಿಕಡ್ಡಿಯ
ಮುರಿದು ಕೊಟ್ಟರೂ
ಅದರಲ್ಲೇ ಖುಷಿ ಪಡುವ
ನಗುವ ಧರಿಸಿರುವವಳೇ
ನನಗೆ ನೀನೇ ಮಗು !
No comments:
Post a Comment