Saturday, 14 April 2018

ಬೊಗಸೆಯನು ಚಾಚಿ

ಹೋಗಿಬಿಟ್ಟರು
ಇದ್ದವರನ್ನೆಲ್ಲಾ ಇದ್ದದ್ದನ್ನೆಲ್ಲಾ ಬಿಟ್ಟು
ಎಲ್ಲಿಗೋ ಏನೋ ಎಂಬ ಗುಟ್ಟ ಬಿಟ್ಟು.... 

ನೋವು ನಲಿವ ಉಂಡು
ತಮ್ಮ ಬಿಂದಿಗೆಯ ನೀರ ತುಂಬಿಕೊಂಡು
ತಣಿಸಿದ್ದು ಉಣಿಸಿದ್ದು ಆ ಬಿಂದಿಗೆಯ ನೀರೇ
ಮೈಯಲ್ಲಿ ಮನದಲ್ಲಿ ಅಮೃತದಂತೆ ಹರಿದು
ಎಲ್ಲಿಂದ ಬಂದಿತ್ತೋ ಅಲ್ಲಿಗೇ ಹೋಗಿರಬಹುದು.....

ಬರಬಹುದು ಮತ್ತೆ ಮಳೆಯಾಗಿ
ಕಾಯಬೇಕಷ್ಟೆ ನಾವು ಬೊಗಸೆಯನು ಚಾಚಿ
ಮನಸಲ್ಲಿ ನಂಬಿಕೆಯ ಶಾಹಿಯ ಗೀಚಿ

No comments:

Post a Comment