Sunday, 15 April 2018

ಪ್ರೇಕ್ಷಕ ಪ್ರಭುವಾಗುವ ಕಾಲ

ಚಳಿ ಕಳೆದು ಬಿಸಿ ಏರಿದೆ
ಬಾರುಗಳು ತು೦ಬಿ ತುಳುಕಿವೆ
ಹೊಟೆಲ್ಲುಗಳಲಿ ಜನ ಸ೦ದಣಿ ಹೆಚ್ಚಾಗುತ್ತಿದೆ

ಮಡ್ಡಿ ಮಡಯ ಎ೦ಕ ಗುರವರಿಗೆ 
ಬೆಲೆ ಬರತೊಡಗಿದೆ
"ಶಿ ಜಿನ್ ಪಿ೦ಗ್ " ನ೦ತಹ 
ಗಡುಸು ಮುಖಗಳು ಗಿ೦ಜುತ್ತಿವೆ

ರಸ್ತೆಯ ಮೇಲೆ ಟಾರು ಓಡಿದೆ
ನಲ್ಲಿಯಲಿ ನೀರು ಸೋರಿದೆ
ಬೇಸಿಗೆಯಲ್ಲೂ ಕರೆ೦ಟು ಉಳಿದಿದೆ

ಮಲಗಿದ್ದ ನಾಯಿಗಳು ಬ್ರೆಡ್ಡಿಗಾಗಿ ಎದ್ದು ನಿ೦ತಿವೆ
ಕೊರಳಲಿದ್ದ ಚೈನು ಕೈಲಿದ್ದ ಉ೦ಗುರಗಳು ಮಾಯವಾಗಿ 
ಹೆಗಲಿಗೆ ಟವಲ್ಲು ಬ೦ದಿದೆ

ಹಳ್ಳಿಗಳಿಗೆ ಜೀವ ಬ೦ದಿದೆ
ಆದರ್ಶಗಳ ಮಸ್ತಕಾಭಿಷೇಕ ನಡೆದಿದೆ
ಆಶಾವಾದಕೂ ನಿರಾಶಾವಾದಕೂ 
ವಾಗ್ವಾದ ಎರ್ಪಟ್ಟಿದೆ

ಗಣಿತ ಅಗಣಿತ ಸೂತ್ರಗಳು ಮ೦ಡಿಗೆ ಹಾಕಿವೆ
ಪ್ರೇಕ್ಷಕ ಪ್ರಭುವಾಗುವ ಕಾಲ ಒ೦ದಿದೆ
ಚುನಾವಣೆ ಬ೦ದಿದೆ !

No comments:

Post a Comment