Sunday, 15 April 2018

ಯಾವ ಮಾತ ಕೇಳಲಿ

ಯಾವ ಮಾತ ಕೇಳಲಿ 
ಬರದೆ ಹೇಗೆ ಹಾಡಲಿ 
ನಿನ್ನ ದನಿಗೆ ನಾನು ಗುನುಗಿ 
ನಟನೆ ಏಕೆ ಮಾಡಲಿ ?

ನನ್ನ ಪಾಡು ನನಗಿರಲಿ 
ನನ್ನ ಹಾಡು ನನಗೆ 
ಸುಖ ದುಃಖ ಬಯಕೆ ಬವಣೆ
ನನ್ನೊಳಗೆ ಮೀಟಲಿ

ಹಾಡಲಿಕ್ಕೆ ಕಂಠ ಸಾಕೆ
ಮನಸು ಮಿಡಿಯ ಬೇಡವೇ 
ಚಿಗುರು ಮಾವ ಉಂಡು ಹಾಡೋ 
ಪಕ್ಷಿ ನಾನೂ ಅಲ್ಲವೇ ?

No comments:

Post a Comment