ಅವೆಷ್ಟು ಕಥೆಗಳು
ಅಡಗಿ ಕುಳಿತಿವೆ ಒಳಗೆ ?
ಭಯಕ್ಕೋ ಸಂಭ್ರಮಕ್ಕೋ
ಬಿಡುಗಡೆಗೋ ಗೊತ್ತಿಲ್ಲ !
ಅಂತರಾಳದ ತಿಳಿಯಕಲಕಿದರೆ
ಬರಬಹುದೇನೋ
ಕಥೆಯಾಗಿ ಕವಿತೆಯಾಗಿ ಬೈಗುಳವಾಗಿ
ಕಣ್ಣೇರಾಗಿ ನಗುವಾಗಿ ಭಾಷ್ಪವಾಗಿ
ಕಲಕುವ ಕೈಯ್ಯ ಕೂಸಾಗಿ
ಆದರೆ
ಎಲ್ಲರೂ ಸಭ್ಯರಾಗಹೊರಟರೆ
ಕಲಕುವರಾರು ?
ತಿಳಿಯನಷ್ಟೇ ಉಂಡು ಉಣಬಡಿಸಿದರೆ
ರುಚಿಕಟ್ಟೀತೇ ಬಾಳು ?
ಅಡಗಿ ಕುಳಿತಿವೆ ಒಳಗೆ ?
ಭಯಕ್ಕೋ ಸಂಭ್ರಮಕ್ಕೋ
ಬಿಡುಗಡೆಗೋ ಗೊತ್ತಿಲ್ಲ !
ಅಂತರಾಳದ ತಿಳಿಯಕಲಕಿದರೆ
ಬರಬಹುದೇನೋ
ಕಥೆಯಾಗಿ ಕವಿತೆಯಾಗಿ ಬೈಗುಳವಾಗಿ
ಕಣ್ಣೇರಾಗಿ ನಗುವಾಗಿ ಭಾಷ್ಪವಾಗಿ
ಕಲಕುವ ಕೈಯ್ಯ ಕೂಸಾಗಿ
ಆದರೆ
ಎಲ್ಲರೂ ಸಭ್ಯರಾಗಹೊರಟರೆ
ಕಲಕುವರಾರು ?
ತಿಳಿಯನಷ್ಟೇ ಉಂಡು ಉಣಬಡಿಸಿದರೆ
ರುಚಿಕಟ್ಟೀತೇ ಬಾಳು ?
No comments:
Post a Comment