Sunday, 19 August 2018

ಹಾಡೇ ಮರೆತುಹೋಗಿದೆ !

ಇನ್ನೂ
ತೋರುಬೆರಳೆ ಮೇಲೆ
ಹಚ್ಚಿಸಿಕೊಂಡ
ಕಪ್ಪು ಶಾಹಿಯೇ ಮಾಸಿಲ್ಲ

ಅಪ್ಪನನ್ನು ಕುರ್ಚಿಯಮೇಲೆ ಕುಳ್ಳಿರಿಸಿ
ಮತಗಟ್ಟೆಗೆ ಎತ್ತುಕೊಂಡು ಹೋದ
ರೆಟ್ಟೆಗಳಲ್ಲಿನ ನೋವು ಇಳಿದಿಲ್ಲ

ಅತಿಹೆಚ್ಚು ಮತದಾನವಾಯಿತು ಎಂದು
ಸಂಬ್ರಮಿಸಿದೆದೆಬಡಿತ ಕಮ್ಮಿಯಾಗಿಲ್ಲ

ಆಗಲೇ ವ್ಯಾಪಾರ ಶುರುವಾಗಿದೆ
ಮನಸ್ಸನೇ ಮಾರಿಕೊಂಡಮೇಲೆ
ಕುದುರೆಯೋ ಕತ್ತೆಯೋ ಯಾವುದಾದರೇನಂತೆ ?
ಬೇಕೆಂದಕಡೆಗೋಡುತ್ತದೆ !

ಪ್ರಾಮಾಣಿಕರನ್ನು ಪ್ರಶ್ನಿಸಿ
ಅಪ್ರಾಮಾಣಿಕರ  ಖಿಲಾಡಿತನವನ್ನು ಹೊಗಳಿ
ಸಮಾಜ ಆತ್ಮಹತ್ಯೆಯ ದಾರಿಹಿಡಿಯುತ್ತಿದೆ !

ರಾಜಕೀಯ ತವಡುಕುಟ್ಟಿ
ಹಾಡೇ ಮರೆತುಹೋಗಿದೆ !


No comments:

Post a Comment